Sbi CBO Recruitment 2025 is now open – ಬ್ಯಾಂಕ್ ಜಾಬ್ ಬೇಕಾ? Apply now for 2600 Circle Based Officer posts. Eligibility, Salary, Selection Process ಎಲ್ಲ ಮಾಹಿತಿ ಇಲ್ಲಿದೆ!
ಭಾರತದ ಅತಿದೊಡ್ಡ ಬ್ಯಾಂಕುಗಳಲ್ಲಿ ಒಂದಾದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಇದೀಗ “ಸರ್ಕಲ್ ಬೇಸ್ಡ್ ಆಫೀಸರ್” (CBO) ಹುದ್ದೆಗಳಿಗೆ ನೇಮಕಾತಿ ಪ್ರಕಟಣೆ ಹೊರಡಿಸಿದೆ. ಈ ಬಾರಿಗೆ ದೇಶದಾದ್ಯಂತ 2600 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ.ಈ ಹುದ್ದೆಗೆ ಅರ್ಜಿ ಹಾಕುವ ಆಸಕ್ತ ಅಭ್ಯರ್ಥಿಗಳು ಈ ಲೇಖನದ ಮೂಲಕ ಅರ್ಹತೆ, ಆಯ್ಕೆ ಪ್ರಕ್ರಿಯೆ, ಜಾಗಗಳ ವಿವರ, ಭಾಷಾ ಅರ್ಹತೆ ಮತ್ತು ಇತರ ಪ್ರಮುಖ ಮಾಹಿತಿ ಪಡೆದುಕೊಳ್ಳಬಹುದು.
Overview of SBI cbo Recruitment 2025.
ಹುದ್ದೆಯ ಹೆಸರು | Circle based officers. |
ನೇಮಕಾತಿ ಸಂಸ್ಥೆ | State bank of india. |
ಪ್ರಾರಂಭ ದಿನಾಂಕ | ಜೂನ್ 21 |
ಅಂತಿಮ ದಿನಾಂಕ | ಜೂನ್ 30 |
ಪರೀಕ್ಷೆ | ಸೆಪ್ಟೆಂಬರ್ |
ವೆಬ್ಸೈಟ್ | https://bank.sbi/web/careers/current-openings |
ಹುದ್ದೆಗಳ ವಿವರ.
ಹೆಚ್ಚು ನೇಮಕಾತಿಗಳು ಕರ್ನಾಟಕ, ಮಹಾರಾಷ್ಟ್ರ, ತೆಲಂಗಾಣ, ಉತ್ತರ ಪ್ರದೇಶ, ರಾಜಸ್ಥಾನ ಮತ್ತು ಗುಜರಾತ್ ರಾಜ್ಯಗಳಲ್ಲಿ ಇವೆ. ಪ್ರತಿಯೊಂದು ಸರ್ಕಲ್‌ನಲ್ಲಿ ಅಭ್ಯರ್ಥಿಗಳು ಅಲ್ಲಿನ ಸ್ಥಳೀಯ ಭಾಷೆ (ಕನ್ನಡ, ತೆಲುಗು, ಹಿಂದಿ, ಮುಂತಾದವು) ಓದಲು, ಬರೆಯಲು ಮತ್ತು ಅರ್ಥಮಾಡಿಕೊಳ್ಳಲು ಯೋಗ್ಯರಾಗಿರಬೇಕು.
ಅರ್ಹತಾ ಮಾನದಂಡ
ಶೈಕ್ಷಣಿಕ ಅರ್ಹತೆ -ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯದಿಂದ ಪದವಿ ಉತ್ತೀರ್ಣರಾಗಿರಬೇಕು.
ಮೆಡಿಕಲ್, ಇಂಜಿನಿಯರಿಂಗ್ ಅಥವಾ ಚಾರ್ಟೆರ್ಡ್ ಅಕೌಂಟೆಂಟ್ ಪದವಿಗಳೂ ಮಾನ್ಯ.
ವಯೋಮಿತಿ–
ಕನಿಷ್ಠ: 21 ವರ್ಷ
ಗರಿಷ್ಠ: 30 ವರ್ಷ
ಪದವಿ ನಂತರ ಕನಿಷ್ಠ 2 ವರ್ಷಗಳ ಅನುಭವ ಹೊಂದಿರುವವರು ಮಾತ್ರ ಅರ್ಜಿ ಹಾಕಬಹುದು. ಈ ಅನುಭವವು ಯಾವುದೇ Commercial Bank ಅಥವಾ Regional Rural Bank ನ Scale-I Officer ಹುದ್ದೆಯಲ್ಲಿ ಇರಬೇಕು.
ಆಯ್ಕೆ ಪ್ರಕ್ರಿಯೆ
1.ಆನ್ಲೈನ್ ಪರೀಕ್ಷೆ
ಆಬ್ಜೆಕ್ಟಿವ್ ಟೆಸ್ಟ್ (120 ಅಂಕಗಳು)
ಡಿಸ್ಕ್ರಿಪ್ಟಿವ್ ಟೆಸ್ಟ್ (50 ಅಂಕಗಳು)
- ಸ್ಕ್ರೀನಿಂಗ್ – ನಿಗದಿತ ಅರ್ಹತೆಗಳಿಗೆ ಅನುಗುಣವಾಗಿ ದಾಖಲೆ ಪರಿಶೀಲನೆ.
- ಇಂಟರ್ವ್ಯೂ – 50 ಅಂಕಗಳಿಗೆ ನಡೆಯಲಿದೆ.
- ಭಾಷಾ ಪರೀಕ್ಷೆ – ಸ್ಥಳೀಯ ಭಾಷೆ.
ವೇತನ ಹಾಗೂ ಸೌಲಭ್ಯಗಳು
ಪ್ರಾರಂಭಿಕ ವೇತನ: ₹48,480 + ಅನುಭವ ಆಧಾರಿತ 2 ಇನ್ಕ್ರಿಮೆಂಟ್
ಇತರೆ ಸೌಲಭ್ಯಗಳು: HRA, DA, NPS, ಲೀಸ್ ಭತ್ತೆ, ವೈದ್ಯಕೀಯ ಸೌಲಭ್ಯ ಇತ್ಯಾದಿ.
ಅರ್ಜಿ ಸಲ್ಲಿಸುವ ವಿಧಾನ.
- SBI ವೆಬ್‌ಸೈಟ್‌ಗೆ ಲಾಗಿನ್ ಆಗಿ.
- “CBO 2025” ಅಧಿಸೂಚನೆ ಓದಿ.
- ಅರ್ಜಿ ಫಾರ್ಮ್ ಭರ್ತಿ ಮಾಡಿ.
- ಅಗತ್ಯ ದಾಖಲೆಗಳು, ಫೋಟೋ ಮತ್ತು ಸಹಿಯನ್ನು ಅಪ್‌ಲೋಡ್ ಮಾಡಿ.
- ಆನ್‌ಲೈನ್ ಮೂಲಕ ಶುಲ್ಕ ಪಾವತಿ ಮಾಡಿ.
ಅರ್ಜಿ ಶುಲ್ಕ
ಜನರಲ್/OBC/EWS: ₹750
SC/ST/PwBD: ಶುಲ್ಕವಿಲ್ಲ
Naveen Kumar N is the founder and content creator of DigitalKannada.in, a platform dedicated to delivering informative and engaging content in the Kannada language. With a passion for digital technology, career development, and current affairs, Naveen brings well-researched articles and updates to help Kannada readers stay informed. His mission is to make knowledge accessible and easy to understand for everyone in Karnataka and beyond.
1 thought on “SBI CBO Recruitment 2025 | ಎಸ್‌ಬಿಐ ಸರ್ಕಲ್ ಆಫೀಸರ್ ಹುದ್ದೆಗೆ Apply ಮಾಡಿ ಇಂದೇ!”