Good news | lic ಪಾಲಿಸಿ ಹೊಂದಿರುವರಿಗೆ ಶುಭ ಸುದ್ದಿ.

Good news | lic ಪಾಲಿಸಿ ಹೊಂದಿರುವರಿಗೆ ಶುಭ ಸುದ್ದಿ.

LIC ನ ಅಧಿಕೃತ WhatsApp ಸೇವೆಯ ಮೂಲಕ ನಿಮ್ಮ ಪಾಲಿಸಿ ಸ್ಟೇಟಸ್, ಬೋನಸ್, ಪಾವತಿ, ಲೋನ್ ವಿವರಗಳನ್ನು ಸುಲಭವಾಗಿ ನಿಮ್ಮ ಮೊಬೈಲ್‌ನಲ್ಲಿಯೇ ಪಡೆಯಿರಿ.

ಭಾರತೀಯ ಜೀವಾ ವಿಮಾ ನಿಗಮವು ಗ್ರಾಹಕರಿಗೆ ಒಂದು ಶುಭ ಸುದ್ದಿ ನೀಡಿದೆ. ಈಗ ಡಿಜಿಟಲ್ ಆಗಿ up grade ಆಗುತ್ತಿದೆ. ಇದರಿಂದ ಗ್ರಾಹಕರಿಗೆ ಇನ್ನು ಹತ್ತಿರವಾಗುತ್ತಿದೆ. ಹೌದು, ಈಗ ಹಲವಾರು ಬ್ಯಾಂಕ್ ಗಳು ವಾಟ್ಸಪ್ಪ್ ಸೇವೆ ಗಳನ್ನು ಗ್ರಾಹಕರಿಗೆ ನೀಡುತ್ತಿದೆ. ಅದೇ ರೀತಿ ಈಗ ಭಾರತೀಯ ಜೀವಾ ವಿಮಾ ನಿಗಮವು ತನ್ನ ಗ್ರಾಹಕರಿಗೆ ಇನ್ನು ಡಿಜಿಟಲ್ ಮಾದರಿಯಲ್ಲೂ ಸೇವೆ ನೀಡಲು ಮುಂದಾಗಿದೆ. ಈಗಾಗಲೇ ಮೊಬೈಲ್ ಅಪ್ಲಿಕೇಶನ್, ಮತ್ತು ವೆಬ್ಸೈಟ್ ಮೂಲಕ ಸೇವೆ ನೀಡುತ್ತಿದ್ದು, ಈಗ ಗ್ರಾಹಕ ಸ್ನೇಹಿಯಾಗಿ ವಾಟ್ಸಪ್ಪ್ ಮೂಲಕವು ಸೇವೆ ನೀಡಲು ಮುಂದಾಗಿದೆ. ಇದರಿಂದ ಗ್ರಾಹಕರಿಗೆ ಮತ್ತಷ್ಟು ಅನುಕೂಲ ವಾಗಲಿದೆ.ಇದರಿಂದ ಗ್ರಾಹಕರು lic ಕಚೇರಿಗೆ ಭೇಟಿ ನೀಡುವ, ಮತ್ತು ಸರತಿ ನಿಲ್ಲುವ ಅವಶ್ಯಕತೆ ಇಲ್ಲ.

LIC WhatsApp chat.

ಭಾರತೀಯ ಜೀವಾ ವಿಮಾ ನಿಗಮವು ವಾಟ್ಸಪ್ಪ್ ಸೇವೆ ಆರಂಭ ಮಾಡಿದ್ದು, ಗ್ರಾಹಕರು ಅದನ್ನ ಪಡೆಯಲು lic ಪೋರ್ಟಲ್ ನಲ್ಲಿ ನೋಂದಣಿ ಮಾಡ್ದಿ ಕೊಳ್ಳ ಬೇಕು.

ನೋಂದಣಿ ಮಾಡಿಕೊಳ್ಳುವುದು ಹೇಗೆ.

1.ನಿಮ್ಮ ಮೊಬೈಲ್ ಫೋನ್ ನಲ್ಲಿ 8976862090 ಸಂಖ್ಯೆ ಸೇವ್ ಮಾಡಿ.

2.ಆ ನಂಬರ್ ಗೆ Hi ಮೆಸೇಜ್ ಮಾಡಿ.

3.ನಂತರ ನಿಮಗೆ LIc ಯು ಮೆನು ಗಳನ್ನು ತೋರಿಸುತ್ತದೆ.

4.ನೀವು ಆ ಮೆನುವಿನಲ್ಲಿ policy status, premium payment, ಅನೇಕ ಸೇವೆಗಳನ್ನು ಪಡೆಯಬಹುದು. Upi, net ಬ್ಯಾಂಕ್ ಮೂಲಕ ಹಣ ಪಾವತಿ ಮಾಡಬಹುದು.

ಈಗ LIC ಪೋರ್ಟಲ್ ನಲ್ಲಿ 2 ಕೋಟಿ ಗ್ರಾಹಕರು ನೋಂದಣಿ ಮಾಡಿಕೊಂಡಿದ್ದಾರೆ. ಪ್ರತಿ ದಿನ 3 ಲಕ್ಷ ಗ್ರಾಹಕರು ಲಾಗ್ in ಆಗುತ್ತಾ ಇದ್ದಾರೆ. ಇದರಿಂದ ಗ್ರಾಹಕರಿಗೆ ಮತ್ತಷ್ಟು ಅನುಕೂಲ ಮತ್ತು ಸಮಯ ಉಳಿತಾಯ ವಾಗುತ್ತದೆ.

Lic ಗ್ರಾಹಕ ಪೋರ್ಟಲ್ ನಲ್ಲಿ ನೋಂದಾಯಿಸುವುದು ಹೇಗೆ.

ಗ್ರಾಹಕರು ಈ ಸೇವೆಗಳನ್ನು ಪಡೆಯಲು lic ವೆಬ್ಸೈಟ್ http://www.licindia.in ಭೇಟಿ ನೀಡಬೇಕು.

1.new, Register ಮೇಲೆ ಕ್ಲಿಕ್ ಮಾಡಬೇಕು.

2.basic service tab ಆಯ್ಕೆ ಮಾಡಿ.

3.ನಿಮ್ಮ policy ವಿವರ ನಮೂದಿಸಿ.

4.ನಿಮ್ಮ policy ಸಂಖ್ಯೆ ಎಂಟ್ರಿ ಮಾಡಿ.

5.ಪ್ರೇಮಿಯಮ್ ಮೊತ್ತ.

6.ಪಾನ್ ಕಾರ್ಡ್ ಪ್ರತಿ ಅಪ್ಲೋಡ್ ಮಾಡಿ.

lic ವಾಟ್ಸಪ್ಪ್ ಸೇವೆ.

lic ವಾಟ್ಸಪ್ಪ್ ಸೇವೆ ಗ್ರಾಹಕರಿಗೆ ತುಂಬಾ ಅನುಕೂಲ ಮತ್ತು ಸಮಯ ಉಳಿತಾಯ ವಾಗುತ್ತದೆ. ಒಟ್ಟಿನಲ್ಲಿ ಭಾರತೀಯ ಜೀವ ವಿಮಾ ನಿಗಮ ಗ್ರಾಹಕರಿಗೆ ಮತ್ತಷ್ಟು ಸ್ನೇಹಮಯವಾಗಿ, ಮಾರ್ಪದು ಆಗಿದೆ. ಇನ್ನು ನೀವು lic ಕಚೇರಿಗೆ ಭೇಟಿ ನೀಡದೆ ನಿಮ್ಮ ಮೊಬೈಲ್ ನಲ್ಲಿ ಮನೆಯಲ್ಲಿ ಕುಳಿತು ನಿಮ್ಮ lic ಯ ಬಗ್ಗೆ ವಿವರ ಪಡೆಯ ಬಹುದು.

ಈಗ ಪ್ರೇಮಿಯಮ್ ಹಣವನ್ನು ಕೂಡ ವೆಬ್ಸೈಟ್, app ಫೋನ್ ಫೆ ಮೂಲಕ ಪಾವತಿ ಮಾಡಬಹುದು. ಇದು ನಿಮಗೆ ಸಮಯ ಉಳಿತಾಯ ವಾಗುತ್ತದೆ.

ನಿಮಗೆ ಈ ಮಾಹಿತಿ ಇಷ್ಟ ವಾಗಿದಲ್ಲಿ ನಿಮ್ಮ ಸ್ನೇಹಿತರೊಂದಿಗೆ ಶೇರ್ ಮಾಡಿ. ನಿಮ್ಮ ಅನಿಸಿಕೆ, ಆ ಅಭಿಪ್ರಾಯಗಳನ್ನು ಕಾಮೆಂಟ್ ಮಾಡಿ..

Frequently asked questions.

1.ಯಾವ ಸಂಖ್ಯೆಯಲ್ಲಿ lic ವಾಟ್ಸಪ್ಪ್ ಸೇವೆ ಲಭ್ಯ ವಿದೆ.

Lic ಯ ಅಧಿಕೃತ ವಾಟ್ಸಪ್ಪ್ ಸಂಖ್ಯೆ –8976862090 ಈ ನಂಬರ್ ಗೆ Hi ಮೆಸೇಜ್ ಮಾಡಿ.

Leave a Comment