ಕೃಷಿ ಭಾಗ್ಯ ಯೋಜನೆ 2025 | ರೈತರಿಗೆ ಸಿಗುತ್ತೆ 90% ಸಬ್ಸಿಡಿ

ಕೃಷಿ ಭಾಗ್ಯ ಯೋಜನೆ 2025ರ ಅಡಿಯಲ್ಲಿ ರೈತರಿಗೆ ಹೊಂಡ ನಿರ್ಮಾಣ, ಪಂಪ್‌ಸೆಟ್ ಹಾಗೂ ನೀರಾವರಿಗಾಗಿ 90% ಸಬ್ಸಿಡಿ ಸಿಗುತ್ತದೆ. ಅರ್ಜಿ ಪ್ರಕ್ರಿಯೆ ಇಲ್ಲಿದೆ

2025ರಲ್ಲಿ ಕರ್ನಾಟಕ ಸರ್ಕಾರದ ಕೃಷಿ ಇಲಾಖೆಯಿಂದ “ಕೃಷಿ ಭಾಗ್ಯ ಯೋಜನೆ 2025 “ಗೆ ಹೊಸ ಉತ್ಸಾಹದ ಜೊತೆಗೆ ಬದಲಾವಣೆಗಳನ್ನೂ ತರಲಾಗಿದೆ. ಈ ಯೋಜನೆಯ ಮುಖ್ಯ ಉದ್ದೇಶ, ಮಳೆಆಧಾರಿತ ಪ್ರದೇಶಗಳ ರೈತರಿಗೆ ನೀರಾವರಿ ವ್ಯವಸ್ಥೆ ಒದಗಿಸುವುದು ಮತ್ತು ಅವರ ಬೆಳೆ ಉತ್ಪಾದನೆ ಹೆಚ್ಚಿಸುವುದು.

ಯೋಜನೆಯ ಉದ್ದೇಶ ಏನು?

ಕೃಷಿ ಭಾಗ್ಯ ಯೋಜನೆ 2025 ಅನ್ನು ರೈತರ ನೀರಾವರಿ ಕೊರತೆಯನ್ನು ಪರಿಹರಿಸಲು ಪರಿಚಯಿಸಲಾಗಿದೆ. ಮುಖ್ಯವಾಗಿ ಮಳೆಾಧಾರಿತ ಪ್ರದೇಶಗಳಲ್ಲಿ ಕೃಷಿ ಮಾಡುವ ರೈತರು ಇದರಿಂದ ಲಾಭ ಪಡೆಯಬಹುದು.

ಹೊಂಡ ನಿರ್ಮಾಣದ ಮೇಲೆ 90% ಸಬ್ಸಿಡಿ!

ಈ ವರ್ಷ ರೈತರಿಗೆ ಸರ್ಕಾರದಿಂದ 21 ಮೀ × 21 ಮೀ × 3 ಮೀ ಗಾತ್ರದ ಹೊಂಡ ನಿರ್ಮಾಣದ ಮೇಲೆ ₹2.20 ಲಕ್ಷವರೆಗೆ ಸಬ್ಸಿಡಿ ನೀಡಲಾಗುತ್ತಿದೆ.

ಸಣ್ಣ ರೈತರಿಗೆ (SC/ST): 90% ಸಬ್ಸಿಡಿ

ಇತರರಿಗೆ: 80%

ಹೊಂಡದ ಮೂಲಕ ಮಳೆನೀರನ್ನು ಸಂಗ್ರಹಿಸಿ, ಬೇಸಿಗೆಯ ಕಾಲದಲ್ಲಿ ಶೇಖರಣೆಯಿಂದ ನೀರಾವರಿ ಮಾಡಬಹುದು.

ಪಂಪ್‌ಸೆಟ್/ಮೋಟಾರ್‌ಗೆ ಸಹ ಸಹಾಯಧನ.

ರೈತರು ತಮ್ಮ ಹೊಂಡದಿಂದ ಬೆಲೆಗೆ ನೀರು ಹೊಳೆಯಲು ಮೋಟಾರ್ ಪಂಪ್ ಬಳಸಬೇಕಾದರೆ, ಇದರ ಮೇಲೂ ಪಂಪ್ ಸೆಟ್‌ಗಳಿಗೆ 50%‑75% ತನಕ ಸಹಾಯಧನ ಲಭ್ಯವಿದೆ.

ಹನಿ ನೀರಾವರಿ ಅಥವಾ ತುಂತುರು ಸಿಸ್ಟಮ್‌ಗೂ ಅನುದಾನ.

ಹೊಂಡದಿಂದ ನಿರ್ವಹಣೆಯೊಂದಿಗೆ ಹನಿ ನೀರಾವರಿ (drip irrigation) ಅಥವಾ ತುಂತುರು ವ್ಯವಸ್ಥೆ (sprinkler) ಗಳು ಅಳವಡಿಸಲು ಕೂಡ ಸರ್ಕಾರದಿಂದ ಪೂರಕ ಸಬ್ಸಿಡಿ ಸಿಗುತ್ತದೆ. ಇದು ಜಲ ಉಳಿತಾಯಕ್ಕೂ ಸಹಾಯ ಮಾಡುತ್ತದೆ.

ಅರ್ಜಿ ಸಲ್ಲಿಸುವ ವಿಧಾನ.

  1. raitha.samrakshane.karnataka.gov.in ವೆಬ್‌ಸೈಟ್‌ಗೆ ಭೇಟಿ ನೀಡಿ.
  2. ನಿಮ್ಮ Aadhaar ಸಂಖ್ಯೆಯಿಂದ ಲಾಗಿನ್ ಮಾಡಿ
  3. ಕೃಷಿ ಭಾಗ್ಯ ಯೋಜನೆ 2025″ ವಿಭಾಗ ಆಯ್ಕೆಮಾಡಿ
  4. ಹೊಂಡ ಗಾತ್ರ, ಸ್ಥಳದ ವಿವರ, ಕಡ್ಡಾಯ ದಾಖಲೆಗಳನ್ನು ಅಪ್ಲೋಡ್ ಮಾಡಿ
  5. ಅರ್ಜಿ ಸಲ್ಲಿಸಿ – ಒಪ್ಪಿಗೆಯಾದ ನಂತರ ಜಿಲ್ಲಾ ಕೃಷಿ ಅಧಿಕಾರಿಯಿಂದ ಪರಿಶೀಲನೆ

ಅಗತ್ಯ ದಾಖಲೆಗಳು

  • ಭೂಮಿ ದಾಖಲೆ (RTC),
  • ಆಧಾರ್ ಕಾರ್ಡ್
  • ಬ್ಯಾಂಕ್ ಖಾತೆ
  • ಪಾಸ್ ಪೋರ್ಟ್ ಫೋಟೋ
  • ಜಮೀನು ನಕ್ಷೆ.

ಅರ್ಜಿ ಹಾಕಲು ಕೊನೆಯ ದಿನಾಂಕ.

2025ರ ಜುಲೈ 31 ಕ್ಕೆ ಅರ್ಜಿ ಸಲ್ಲಿಸಲು ಕೊನೆಯ ದಿನ.(ಹವಾಮಾನ ಅಥವಾ ಯೋಜನಾ ವಿಸ್ತರಣೆಯ ಆಧಾರದ ಮೇಲೆ ಬದಲಾವಣೆ ಸಾಧ್ಯ)

ರೈತರು ತಮ್ಮ ಜಮೀನಿನಲ್ಲಿ ನೀರಿನ ಕೊರತೆಯಿಂದ ಪರಿತಪಿಸುತ್ತಿರುವ ಈ ಸಮಯದಲ್ಲಿ, ಕೃಷಿ ಭಾಗ್ಯ ಯೋಜನೆ 2025 ಒಂದು ಮಹತ್ತರ ಅವಕಾಶ. ಈ ಯೋಜನೆಯ ಸದುಪಯೋಗ ಪಡಿಸಿ, ನೀರಾವರಿಯನ್ನು ಖಚಿತಪಡಿಸಿಕೊಂಡು ಉತ್ತಮ ಬೆಳೆ ಬೆಳೆಯಿಸಿಕೊಳ್ಳಿ

Leave a Comment